ಡಾ. ಎಸ್. ಹೆಚ್. ಪ್ಯಾಟಿ ಅವರಿಂದ ಒಂದು ಪ್ರಾಸ್ತಾವಿಕ ನುಡಿ

ಆತ್ಮೀಯ ವಿದ್ಯಾರ್ಥಿಗಳೆೇ,

ನಮ್ಮ ಸಂಸ್ಥೆಗೆ ನಿಮ್ಮನ್ನು ಸ್ವಾಗತಿಸಲು ಬಹಳ ಸಂತೋಷವಾಗುತ್ತದೆ. ನಮ್ಮ ಕಾಲೇಜಿನಲ್ಲಿ ಇರುವ ಅವಧಿಯಲ್ಲಿ  ಬೋಧನೆ, ಕಲಿಕೆ, ಕ್ರೀಡೆ, ಗ್ರಂಥಾಲಯ ಸೌಲಭ್ಯಗಳು ಇತ್ಯಾದಿಗಳ ಬಗ್ಗೆ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ನೇರವಾಗಿ ನನ್ನ ಭೇಟಿ ಮಾಡಿ ಮುಕ್ತವಾಗಿ ನನ್ನೊ0ದಿಗೆ ಮಾತನಾಡಬಹುದು. ಈ ಚರ್ಚೆ ನಮ್ಮ ಕಾಲೇಜಿನ ಎಲ್ಲಾ ಸಮಗ್ರ ಅಭಿವೃದ್ಧಿಯಲ್ಲಿ ನಮಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ.

ಭಗವಾನ್ ಹರಿಹರೇಶ್ವರನ ಆಶೀರ್ವಾದದಿಂದ, ದಾನಿಗಳು ಮತ್ತು ಮಾಜಿ ಪುರಸಭೆ ಅಧ್ಯಕ್ಷರಾದ ಶ್ರೀ ರಾಮಶ್ರೇಷ್ಠಿ ಮತ್ತು ಸ್ಥಾಪಕ ಸದಸ್ಯರ ಪ್ರಾಮಾಣಿಕ ಪ್ರಯತ್ನಗಳಿಂದ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಪಿ.ಯು ಕಾಲೇಜು ಮತ್ತು ಪದವಿ ಕಾಲೇಜುಗಳನ್ನು ತೆರೆಯಲಾಗಿದೆ. ಮತ್ತು ಹರಿಹರ ತಾಲ್ಲೂಕಿನ 1200 ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಗಳನ್ನು ಅವರು ಪ್ರತಿ ವರ್ಷ ಪೂರೈಸುತ್ತಿದ್ದಾರೆ. ಅವರು ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿದ್ದಾರೆ. ಸಾರ್ವಜನಿಕರ ಸಹಕಾರ, ನಮ್ಮ ನಿರ್ವಹಣೆ, ವಿ.ವಿ. ಧನ ಸಹಾಯ ಆಯೋಗ, ಮಾನವ ಸಂಪನ್ಮೂಲ ಇಲಾಖೆ ಮತ್ತು ನಮ್ಮ ವಿದ್ಯಾರ್ಥಿಗಳ ಯಶಸ್ಸಿಗೆ ಶ್ರಮಿಸುತ್ತಿರುವ ಸಿಬ್ಬಂದಿಗಳೊಂದಿಗೆ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿಸಾಧಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ನಮ್ಮ ಸಂಸ್ಥೆಯ ಎಲ್ಲ ಸಮಗ್ರ ಬೆಳವಣಿಗೆಗೆ ಇವರೆಲ್ಲರೂ ಪ್ರಮುಖ ಕಾರಣವೆಂದು ಹೇಳುವಲ್ಲಿ ನನಗೆ ಸಂತೋಷವಿದೆ ಮತ್ತು ನಾನು ಅವರಿಗೆ ಪೂರ್ಣವಾಗಿ ಧನ್ಯವಾದ ಹೇಳುತ್ತೇನೆ.

2005-2006ರಲ್ಲಿ ನಡೆದ ಪರೀಕ್ಷೆಯಲ್ಲಿ ನಮ್ಮ ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದಲ್ಲಿ (ಹತ್ತರಲ್ಲಿ) ಆರು ರಾಂಕ್ ಗಳನ್ನು ಪಡೆದು, ಕಲಾ ವಿಭಾಗದಲ್ಲಿ ಒಂದು ರಾಂಕ್ ತoದು ನಮ್ಮ ಕಾಲೇಜಿಗೆ ದೊಡ್ಡ ಹೆಸರನ್ನು ತಂದಿದ್ದಾರೆ ಎಂದು ಹೇಳಲು ನಾನು ಬಹಳ ಸಂತೋಷ ಮತ್ತು ಹೆಮ್ಮೆಪಡುತ್ತೇನೆ. ಬಿ.ಸಿ.ಎ. ವಿಭಾಗದಲ್ಲಿ ಎರಡು ರಾಂಕ್ ಗಳು ಮತ್ತು ಎರಡು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಕ್ರೀಡಾ ವಿಭಾಗದಲ್ಲಿ, ನಮ್ಮ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಮಟ್ಟದಲ್ಲಿ ‘ಭಾರ ಎತ್ತುವಿಕೆ’ ಮತ್ತು ‘ಪವರ್ ಲಿಫ್ಟಿಂಗ್’ ಸ್ಪರ್ಧೆಗಳಲ್ಲಿ ದಾಖಲೆಯನ್ನು ಮಾಡಿದ್ದಾರೆ ಮತ್ತು ‘ಚಿನ್ನ’ , ‘ಬೆಳ್ಳಿ’ ಮತ್ತು ‘ಕಂಚು’ ಪದಕಗಳನ್ನು ಗೆದ್ದಿದ್ದಾರೆ. ಮತ್ತು ಪ್ರತಿ ವರ್ಷ, ನಮ್ಮ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕೆಲವರು ವಿಶ್ವವಿದ್ಯಾಲಯದ ಆಟಗಾರರಾಗಿ ಆಯ್ಕೆಯಾಗುತ್ತಾರೆ ಮತ್ತು ಅವರು ನಮ್ಮ ಸಂಸ್ಥೆಗೆ ಉತ್ತಮ ಹೆಸರು ಮತ್ತು ಖ್ಯಾತಿಯನ್ನು ತಂದಿದ್ದಾರೆ. ಇಲ್ಲಿಯವರೆಗೆ, ನಮ್ಮ ಕಾಲೇಜಿನ ಸುಮಾರು 70 ವಿದ್ಯಾರ್ಥಿಗಳು ಕುವೆಂಪು ಮತ್ತು ದಾವಣಗೆರೆ ವಿಶ್ವವಿದ್ಯಾನಿಲಯಗಳನ್ನು ಪ್ರತಿನಿಧಿಸಿದ್ದಾರೆ. ಸಾಂಸ್ಕೃತಿಕ ವಿಭಾಗದಲ್ಲಿ, ನಮ್ಮ ವಿದ್ಯಾರ್ಥಿಗಳು ಕಾಲೇಜು, ವಿಶ್ವವಿದ್ಯಾನಿಲಯ, ಅಂತರ-ವಿಶ್ವವಿದ್ಯಾಲಯ ಮತ್ತು ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಅನೇಕ ಬಹುಮಾನಗಳನ್ನು ಗೆದ್ದಿದ್ದಾರೆ.

ನಾವು ನಮ್ಮ ವಿದ್ಯಾರ್ಥಿಗಳಿಗೆ ಅನೇಕ ಸೌಲಭ್ಯಗಳನ್ನು ಒದಗಿಸಿದ್ದೇವೆ. ಕಂಪ್ಯೂಟರ್ ಲ್ಯಾಬ್, ಡಿಜಿಟಲ್ ಕ್ಲಾಸ್ ರೂಂಗಳು, ಡಿಜಿಟಲ್ ಲೈಬ್ರರಿ ಮತ್ತು ಕ್ಯಾಂಟೀನ್ ಇದೆ. ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯಿಂದ ಬಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ನಾವು ‘ಬಡ ವಿದ್ಯಾರ್ಥಿಗಳ ನಿಧಿ’ಯನ್ನು ಸ್ಥಾಪಿಸಿದ್ದೇವೆ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ನಾವು ವಿಶೇಷ ಗ್ರಂಥಾಲಯ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ ಮತ್ತು ಪ್ರತಿವರ್ಷ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸುವ ಉತ್ತಮ ಸಂಪ್ರದಾಯವನ್ನು ನಾವು ಹೊಂದಿದ್ದೇವೆ. ನಮ್ಮ ವಿದ್ಯಾರ್ಥಿಗಳನ್ನು ಉತ್ತೇಜಿಸಲು ‘ವರ್ಷದ ಅತ್ಯುತ್ತಮ ವಿದ್ಯಾರ್ಥಿ’ ಮತ್ತು ‘ವರ್ಷದ ಅತ್ಯುತ್ತಮ ಸೇವಾ ಮನೋಭಾವದ ವಿದ್ಯಾರ್ಥಿ’ ಎಂಬ ವಿಶೇಷ ಪ್ರಶಸ್ತಿಗಳಿವೆ. ಈ ಎಲ್ಲ ಉತ್ತಮ ಸೌಲಭ್ಯಗಳನ್ನು ಬಳಸುವುದರ ಮೂಲಕ, ನೀವು ನಮ್ಮ ಸಂಸ್ಥೆಗೆ ಉತ್ತಮ ಹೆಸರನ್ನು ಮತ್ತು ಖ್ಯಾತಿಯನ್ನು ತರುತ್ತೀರಿ ಎಂದು ನಾನು ಆಶಿಸುತ್ತೇನೆ.

ನಿಮಗೆ ಶುಭವಾಗಲಿ.

ಡಾ. ಎಸ್. ಹೆಚ್. ಪ್ಯಾಟಿ
ಪ್ರಾಂಶುಪಾಲರು