ಕಾಲೇಜಿನ ಸಂಕ್ಷಿಪ್ತ ಇತಿಹಾಸ ಮತ್ತು ಮೈಲಿಗಲ್ಲುಗಳು

ಹರಿಹರ, ಹೆಸರೇ ಸೂಚಿಸುವಂತೆ, ಹರಿ ಮತ್ತು ಹರನ ಪವಿತ್ರ ಸಂಗಮದ ಸ್ಥಳವಾಗಿದೆ. ಈ ಕಾರಣದಿಂದಲೇ ದಕ್ಷಿಣ ಕಾಶಿ ಎಂದು ಕರೆಯಲಾಗುತ್ತಿದೆ. ಈ ಪಟ್ಟಣವು ತುಂಗಭದ್ರಾ ನದಿ ತೀರದಲ್ಲಿದೆ. ಇದು ಒಂದು ಕೈಗಾರಿಕಾ ಪಟ್ಟಣವೂ ಹೌದು. ಒಂದು ದೊಡ್ಡ ಉದ್ಯಮ, ಪಾಲಿಫೈಬರ್ಸ್, ಮತ್ತು ಅನೇಕ ಇತರ ಸಣ್ಣ-ಪ್ರಮಾಣದ ಕೈಗಾರಿಕೆಗಳು ಇಲ್ಲಿವೆ. ಇದು ಭದ್ರಾ ಜಲಾಶಯದಿಂದ ಹರಿಯುವ ನೀರಿನೊಂದಿಗೆ ನೀರಾವರಿ ಸೌಲಭ್ಯವನ್ನು ಹೊಂದಿದೆ. ಹರಿಹರ ಜಂಕ್ಷನ್ ಆಗಿದೆ, ಇದು ರಾಷ್ಟ್ರೀಯ ಹೆದ್ದಾರಿ 4 ರೊಂದಿಗೆ ಉತ್ತಮ ಸಂಪರ್ಕ ಹೊಂದಿದೆ.

ಹರಿಹರ ತಾಲ್ಲೂಕು ಮಹಾನ್ ಲೇಖಕರು, ಕಲಾವಿದರು ಮತ್ತು ಸಂಗೀತಗಾರರನ್ನು ನಿರ್ಮಿಸಿದ ಮಹತ್ವವನ್ನು ಹೊಂದಿದೆ. ಪ್ರಸಿದ್ಧ ಸಾಹಿತಿಗಳಾದ ಹೆಳವನಕಟ್ಟೆ ಗಿರಿಯಮ್ಮ ಮತ್ತು ಪಿ. ಲಂಕೇಶ್ ಈ ತಾಲ್ಲೂಕಿನವರು. ಹಲವಾರು ಕ್ರೀಡಾ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಈ ಪಟ್ಟಣದಲ್ಲಿವೆ ಮತ್ತು ಉತ್ತಮ ಸಾಹಿತ್ಯ ಮತ್ತು ಸಾಂಸ್ಕೃತಿಕ ವಾತಾವರಣವನ್ನು ಸೃಷ್ಟಿಸಿವೆ. ಹರಿಹರ ಅನೇಕ ಕವಿಗಳು, ಬರಹಗಾರರು, ಬುದ್ಧಿಜೀವಿಗಳು ಮತ್ತು ಕ್ರೀಡಾಪಟುಗಳ ವಾಸಸ್ಥಾನವಾಗಿದೆ.

“ಶ್ರೀಮತಿ ಗಿರಿಯಮ್ಮ ಆರ್. ಕಾಂತಪ್ಪ ಶ್ರೇಷ್ಠಿ ಮಹಿಳಾ ಪ್ರಥಮ ದರ್ಜೆ ಕಾಲೇಜು” ದಾವಣಗೆರೆ ವಿಶ್ವವಿದ್ಯಾಲಯದ ಪ್ರಸಿದ್ಧ ಕಾಲೇಜುಗಳಲ್ಲಿ ಒಂದಾಗಿದೆ. ಹರಿಹರ ಪಟ್ಟಣದಲ್ಲಿನ ಪ್ರತ್ಯೇಕ ಕಾಲೇಜಿನ ಅವಶ್ಯಕತೆಯನ್ನು ಅರಿತುಕೊಂಡ ಪೌರ ಸೇವಾ ಸಮಿತಿಯು 1984 ರಲ್ಲಿ ಈ ಕಾಲೇಜನ್ನು ಪ್ರಾರಂಭಿಸಿತು. ಅದರ ಸ್ಥಾಪನೆಯಿಂದ ಇಂದಿನವರೆಗೆ ಈ ಕಾಲೇಜು ತನ್ನ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದೆ. ಈ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಶಾಂತ ವರ್ತನೆ, ಅತ್ಯುತ್ತಮ ಪ್ರತಿಭೆ, ಮತ್ತು ಉದಾತ್ತ ಗುಣಗಳಿಗಾಗಿ ಹೆಸರುವಾಸಿಯಾಗಿದ್ದಾರೆ.

ಜ್ಞಾನಿಗಳು ಮತ್ತು ಸಮಾಜ ಸೇವಾಸಕ್ತ ಸದಸ್ಯರುಗಳನ್ನು ಒಳಗೊಂಡ ನಮ್ಮ ಆಡಳಿತ ಮಂಡಳಿಯು ಪೌರಸೇವಾ ಸಮಿತಿಯನ್ನು ಕರ್ನಾಟಕ ಸಂಘ ಸಂಸ್ಥೆಗಳ ನೋಂದಣಿ ಕಾಯ್ದೆ 1960 ರ ಪ್ರಕಾರ ದಿನಾಂಕ 28-09-1979 ರಂದು ನೋಂದಾಯಿಸಿದೆ. ಇಡೀ ಆಡಳಿತ ಮಂಡಳಿಯು ಜಾತಿ-ಮತ-ಪಂಥ-ವರ್ಗಗಳ ತಾರತಮ್ಯಗಳನ್ನು ಮೀರಿ ಎಲ್ಲಾ ವಿದ್ಯಾರ್ಥಿನಿಯರು ಒಳ್ಳೆಯ ಶಿಕ್ಷಣ ಪಡೆಯುವ ಮೂಲಕ ಸ್ವಾವಲಂಬಿಗಳಾಗಬೇಕು ಮತ್ತು ಅವರು ಪುರುಷ ದಬ್ಬಾಳಿಕೆ ಮತ್ತು ಲಿಂಗತಾರತಮ್ಯಗಳ ಸರಪಳಿಗಳಿಂದ ಮುಕ್ತರಾಗಬೇಕೆಂಬ ಚಿಂತನೆಯಲ್ಲಿ ಬಲವಾದ ನಂಬಿಕೆ ಹೊಂದಿದೆ.

ನಮ್ಮ ಸಂಸ್ಥೆಯ ಆರಂಭದಿಂದ ಇಲ್ಲಿಯವರೆಗಿನ ಮೈಲಿಗಲ್ಲುಗಳ ವಿವರಗಳು ಈ ಕೆಳಗಿನಂತಿವೆ :
1984
ಕರ್ನಾಟಕ ಸರ್ಕಾರದ ಆದೇಶದಿಂದ ಪ್ರಸ್ತುತ ಪದವಿ ಕಾಲೇಜು ಅಕ್ಟೋಬರ್ 1984 ರಲ್ಲಿ ಪ್ರಾರಂಭವಾಯಿತು.
1984
ಮೊದಲ ವರ್ಷದ ಪ್ರಾರಂಭದಲ್ಲಿ 13 ವಿದ್ಯಾರ್ಥಿಗಳು, 5 ಬೋಧಕ ಮತ್ತು 1 ಬೋಧಕೇತರ ಸಿಬಂದಿಯಿದ್ದರು. ಗ್ರಂಥಾಲಯದಲ್ಲಿ 278 ಪುಸ್ತಕಗಳಿದ್ದವು ಮತ್ತು ಮೂರು ಕೊಠಡಿಗಳಿದ್ದವು.
1984
ಆರಂಭದಲ್ಲಿ ಬಿ.ಎ. ಎಚ್ಇಪಿ [ HEP ] ಮತ್ತು ಎಚ್ಇ ಎಸ್ [ HES ] ಮತ್ತು ಬಿ. ಕಾಂ., ಕಡ್ಡಾಯ ವಿಷಯಗಳೊಂದಿಗೆ ಪ್ರಾರಂಭಿಸಲಾಯಿತು.
1987
1987 ರಲ್ಲಿ ಕಾಲೇಜಿನ ಮೊದಲ ತಂಡ ಹೊರಬಂದಿತು. ಬಿ.ಎ. ಮತ್ತು ಬಿ.ಕಾಂ., ಫಲಿತಾಂಶ 67% ಆಗಿತ್ತು.
1984-85
1984-85ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ನಮ್ಮ ಕಾಲೇಜಿಗೆ ಮೊದಲ ಸಂಯೋಜನೆಯನ್ನು ನೀಡಲಾಯಿತು ಮತ್ತು 1988-89ರ ಶೈಕ್ಷಣಿಕ ವರ್ಷದಿಂದ ನಮ್ಮ ಕಾಲೇಜು ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಸಂಯೋಜನೆಗೊಂಡಿತು. 18-08-2008 ರಂದು ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಾರಂಭದೊಂದಿಗೆ, ನಮ್ಮ ಕಾಲೇಜು 2008-09ರ ಶೈಕ್ಷಣಿಕ ವರ್ಷದಿಂದ ದಾವಣಗೆರೆ ವಿಶ್ವವಿದ್ಯಾನಿಲಯದ ಸಂಯೋಜನೆ ಪಡೆದಿದೆ.
18-04-1991
18-04-1991 ರಿಂದ ನಮ್ಮ ಕಾಲೇಜಿಗೆ ಕರ್ನಾಟಕ ಸರ್ಕಾರದಿಂದ ವೇತನ ಸಹಾಯಧನ ದೊರೆಯುತ್ತಿದೆ.
1992
ಪ್ರಸ್ತುತ ವಿಶಾಲವಾದ, ಸುಸಜ್ಜಿತವಾದ ಕಟ್ಟಡವನ್ನು ಪೂರ್ಣ ಪ್ರಮಾಣದ ಸೌಲಭ್ಯಗಳೊಂದಿಗೆ ನಿರ್ಮಿಸಲು 1992 ರಲ್ಲಿ ಪ್ರಾರಂಭಿಸಲಾಯಿತು.
1994-95
ನಾವು ಬಿ.ಕಾಂ.ನಲ್ಲಿ ಮೂರನೇ ರ‍್ಯಾoಕ್ ನೊಂದಿಗೆ 1994-95ರ ಅವಧಿಯಲ್ಲಿ ನಮ್ಮ ರ‍್ಯಾoಕ್ ಖಾತೆಯನ್ನು ತೆರೆದಿದ್ದೇವೆ ಮತ್ತು ಇಲ್ಲಿಯವರೆಗೂ ನಾವು 51 ರ‍್ಯಾoಕ್ ಗಳನ್ನು ಪಡೆದುಕೊಂಡಿದ್ದೇವೆ. 2005-06ರ ಶೈಕ್ಷಣಿಕ ವರ್ಷದಲ್ಲಿ 9 ರ‍್ಯಾoಕ್ ಗಳೊಂದಿಗೆ (ಬಿ.ಕಾಂ.ನಲ್ಲಿ 6 ಸ್ಥಾನಗಳು, ಮತ್ತು ಬಿ.ಎ.ಯಲ್ಲಿ 3 ಸ್ಥಾನಗಳು), ನಾವು ಕುವೆಂಪು ವಿಶ್ವವಿದ್ಯಾನಿಲಯದ ಇತಿಹಾಸದಲ್ಲಿ ಗರಿಷ್ಠ ಸಂಖ್ಯೆಯ ರ‍್ಯಾoಕ್ ಗಳನ್ನು ಪಡೆದು ದಾಖಲೆ ಮಾಡಿದ್ದೇವೆ.
1998-99
1998-99ರ ಶೈಕ್ಷಣಿಕ ವರ್ಷದಲ್ಲಿ ಕುವೆಂಪು ವಿಶ್ವವಿದ್ಯಾನಿಲಯವು ನಮ್ಮ ಕಾಲೇಜಿಗೆ ಶಾಶ್ವತವಾದ ಸಂಯೋಜನೆಯನ್ನು ನೀಡಿತು.
1999
1999 ರಲ್ಲಿ ನಮ್ಮ ಕಾಲೇಜನ್ನು 1956 ಯೋಜನೆ ಕಾಯ್ದೆ 2(F) ಮತ್ತು12(B) ಗೆ ಸೇರಿಸಲಾಯಿತು.
1999
ಬಿ.ಎ. ಸಂಯೋಜನೆಗಳು:
1) ಇತಿಹಾಸ, ಸಮಾಜಶಾಸ್ತ್ರ, ಶಿಕ್ಷಣ.    2) ಇತಿಹಾಸ, ರಾಜ್ಯಶಾಸ್ತ್ರ, ಶಿಕ್ಷಣ.    3) ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ.    4) ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ.
1992
ನಮ್ಮ ಕಾಲೇಜು ಕಬಡ್ಡಿಯಲ್ಲಿ 1992 ರಲ್ಲಿ ಮೊದಲ ಬಾರಿಗೆ ವಿಶ್ವವಿದ್ಯಾಲಯ ತಂಡದ ಸದಸ್ಯತ್ವ ಪಡೆದುಕೊಂಡಿತು. 2005 ರ ಶೈಕ್ಷಣಿಕ ವರ್ಷದಲ್ಲಿ ಯುನಿವರ್ಸಿಟಿ ಮಟ್ಟದಲ್ಲಿ ಕಬಡ್ಡಿಯಲ್ಲಿ ಪ್ರಥಮ ಸ್ಥಾನವನ್ನು, ತೂಕ ಮತ್ತು ಪವರ್ ಲಿಫ್ಟಿಂಗ್ನಲ್ಲಿ ಚಾಂಪಿಯನ್ಷಿಪ್ ಪಡೆದಿದೆ.
2006-07
2006-07ರಲ್ಲಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳ ಪೈಕಿ ಒಬ್ಬರು ಮಧುರೈ (ತಮಿಳುನಾಡು) ನಲ್ಲಿ ನಡೆದ ದಕ್ಷಿಣ ವಲಯ ಅಂತರ-ವಿಶ್ವವಿದ್ಯಾಲಯ ಯುವಜನೋತ್ಸವದಲ್ಲಿ ಭಾಗವಹಿಸಿದ್ದರು.
2004-05
'ಹಳೆಯ ವಿದ್ಯಾರ್ಥಿ ಸಂಘ' ವನ್ನು 2004-05 ರಲ್ಲಿ ಸ್ಥಾಪಿಸಲಾಯಿತು ಮತ್ತು 2005-06ರಲ್ಲಿ ನೋಂದಣಿ ಮಾಡಲಾಯಿತು.
1994-95
1994-95ರ ಶೈಕ್ಷಣಿಕ ವರ್ಷದಿಂದ ‘ಅನುಪಮಾ’ ಪತ್ರಿಕೆಯನ್ನು ಕಾಲೇಜು ಪ್ರಕಟಿಸಲು ಪ್ರಾರಂಭಿಸಿತು.
ಮೊದಲ ಪಿಎಚ್.ಡಿ
ಮೊದಲ ಪಿ.ಎಚ್.ಡಿ. ಯನ್ನು 1996ರಲ್ಲಿ ಹಿಂದಿ ಪ್ರಾದ್ಯಾಪಕರು ಮತ್ತು ಮೊದಲ ಎಂ.ಫಿಲ್ ಅನ್ನು ಇಂಗ್ಲಿಷ್ ಅಧ್ಯಾಪಕರು ಪಡೆದಿದ್ದರೆ.
30 ಕಂಪ್ಯೂಟರ್
ಕಾಲೇಜಿನಲ್ಲಿ 3೦ ಕಂಪ್ಯೂಟರ್'ಗಳನ್ನು ಹೊಂದಿರುವ ಕಂಪ್ಯೂಟರ್ ಲ್ಯಾಬ್ ಇದೆ.
6
ನಮ್ಮಲ್ಲಿ ಆರು ಡಿಜಿಟಲ್ ತರಗತಿಗಳಿವೆ.
ಗ್ರಂಥಾಲಯ
ಗ್ರಂಥಾಲಯ ಸಂಪೂರ್ಣವಾಗಿ ಡಿಜಿಟಲ್ ಆಗಿದೆ.

ಈ ಸಂಸ್ಥೆಯು ನಿರಂತರ ಮುಂದುವರೆಯುತ್ತಿದೆ ಮತ್ತು ಪ್ರಸ್ತುತ ನಾವು ಜಾಗತಿಕ ಮಾರುಕಟ್ಟೆಯ ಅಗತ್ಯತೆಗಳನ್ನು ನಿಭಾಯಿಸಲು ಸಮರ್ಥರಾದ ಮತ್ತು ಅನುಭವಿ ಸಿಬ್ಬಂದಿ ಮತ್ತು ವ್ಯವಸ್ಥಿತ ಸೌಲಭ್ಯಗಳನ್ನು ಹೊಂದಿದ್ದೇವೆ.